ಜಿóನೋಬಿಯ 1 -
	ಡಮಾಸ್ಕಸ್‍ನ ಈಶಾನ್ಯಕ್ಕೆ 135 ಮೈ . ದೂರದಲ್ಲಿರುವ ಪಾಲ್ಮೈರ ಎಂಬಲ್ಲಿ 3ನೆಯ ಶತಮಾನದಲ್ಲಿ ಆಳುತ್ತಿದ್ದ ಆಡಿನ್ಯಾತಸ್ ದೊರೆಯ ಪತ್ನಿ ; ಅವನ ಅನಂತರ ಅದನ್ನಾಳಿದ ರಾಣಿ ಆಂಟಿಯೊಕಸನ ಮಗಳು. ಅವನು ಪ್ರಾಯಶಃ ಪಾಲ್ಮೈರಿನ ವರಿಷ್ಠ ಪ್ರಜೆ.  ಆಡಿನ್ಯಾತಸನೂ ಅವನ ಇನ್ನೊಬ್ಬ ಪತ್ನಿಗೆ ಹುಟ್ಟಿದ ಮಗನೂ ಕೊಲೆಯಾದಾಗ (267/268) ತನ್ನ ಚಿಕ್ಕವಯಸ್ಸಿನ ಮಗ ವಾಬಲಾತನ ಪರವಾಗಿ ಇವಳು ರಾಜ್ಯವಾಳಿದಳು.  ಅವರ ಕೊಲೆಗೆ ಜಿûನೋಬಿಯಳೇ ಕಾರಣವಾಗಿರಬೇಕೆಂದು ಊಹಿಸಲಾಗಿದೆ. ಪೂರ್ವ ರೋಮನ್ ಸಾಮ್ರಾಜ್ಯದ ಪೂರ್ವ ಭಾಗದಲ್ಲೆಲ್ಲ ತನ್ನ ರಾಜ್ಯವನ್ನು ವಿಸ್ತರಿಸಬೇಕೆಂಬ ಮಹತ್ತ್ವಾಕಾಂಕ್ಷೆಯಿಂದ ಇವಳು ಈಜಿಪ್ಟನ್ನು ಆಕ್ರಮಿಸಿಕೊಂಡು ಏಷ್ಯ ಮೈನರಿನಲ್ಲಿ ಸೈನ್ಯ ನಿಲ್ಲಿಸಿದಳು. ತನ್ನ ಈ ಕೃತ್ಯಗಳಲ್ಲೆಲ್ಲ ರೋಮ್ ಸರ್ಕಾರ ಬೆಂಬಲ ಇರುವುದೆಂಬ ಭಾವನೆ ಮೂಡುವಂತೆ ನಟಿಸಿದಳು. ಆರೀಲಿಯನ್ ರೋಮನ್ ಚಕ್ರವರ್ತಿಯಾದ ಮೇಲೆ ಸ್ವತಂತ್ರಳಂತೆ ವರ್ತಿಸಿದಳು. ಚಕ್ರವರ್ತಿ ಆರೀಲಿಯಾನ್ ಈಕೆಯನ್ನು 271-72ರಲ್ಲಿ ಸೋಲಿಸಿ, ತನ್ನ ವಿಜಯದ ಪ್ರದರ್ಶನವಾಗಿ ಇವಳನ್ನು ರೋಮಿಗೆ ಕರೆದುಕೊಂಡು ಹೋದ. ಅನಂತರ ಅವನು ಸುಂದರಿಯಾದ ಜಿûನೋಬಿಯಳಿಗೆ ಕ್ಷಮಾದಾನ ಮಾಡಿ ಟವೋಲಿಯ ಬಳಿ ಜಮೀನನ್ನು ಉಂಬಳಿಯಾಗಿ ಕೊಟ್ಟ . ಇವಳು ಸನೇಟರನೊಬ್ಬನನ್ನು ಮದುವೆಯಾಗಿ ಅಲ್ಲೇ ನೆಲೆಸಿದಳು. 

	ರೋಮನ್ ಲೇಖಕರು ಜಿûನೋಬಿಯಾಳನ್ನು ಎರಡನೆಯ ಕ್ಲೀಯೊಪಾತ್ರಾಳೆಂದು ಬಣ್ಣಿಸಿದ್ದಾರೆ. ಆದರೆ ಅರಬ್ ಪರಂಪರೆಯಲ್ಲಿ ಇವಳು ಕೊಲೆಗಡುಕಿ ರಾಣಿ ಅಲ್-ಜಬ್ಬಾ ಎಂದು ಕುಖ್ಯಾತಳಾಗಿದ್ದಾಳೆ.				(ಕೆ.ಎನ್.ಎ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ